ಅಭಿಪ್ರಾಯ / ಸಲಹೆಗಳು

ರಾಜಭಾಷಾ (ವಿಧಾಯೀ) ಆಯೋಗ

 

ಭಾಷಾಂತರ ನಿರ್ದೇಶನಾಲಯದ ಭಾಷಾಂತರ ವಿಭಾಗದ ಕೇಂದ್ರ ಶಾಸನ ಶಾಖೆ ಮತ್ತು ರಾಜ್ಯ ಶಾಸನ ಶಾಖೆಯು ಸಿದ್ಧಪಡಿಸಿದ ಕೇಂದ್ರ ಅಧಿನಿಯಮಗಳ ಮತ್ತು ರಾಜ್ಯ ಅಧಿನಿಯಮಗಳ, ನಿಯಮಗಳ ಭಾಷಾಂತರವನ್ನು ಪರಿಶೀಲಿಸಿ, ಪರಿಷ್ಕರಿಸಿ ಸಂದರ್ಭಾನುಸಾರ 1973ರ ಅಧಿಕೃತ ಪಾಠಗಳ ( ಕೇಂದ್ರ ಶಾಸನಗಳು) ಅಧಿನಿಯಮದ 2(ಎ) ಪ್ರಕರಣಕ್ಕನುಸಾರವಾಗಿ, 1963ರ ಕರ್ನಾಟಕ ರಾಜಭಾಷಾ ಅಧಿನಿಯಮದ 5ಎ ಪ್ರಕರಣಕ್ಕನುಸಾರವಾಗಿ ಅಧಿಕೃತ ಪಾಠಗಳನ್ನು ಸಿದ್ಧಪಡಿಸುವುದಕ್ಕಾಗಿ ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ಕರ್ನಾಟಕ ರಾಜಭಾಷಾ (ವಿಧಾಯೀ) ಆಯೋಗವನ್ನು ರಚಿಸುತ್ತದೆ. 

          ಕನ್ನಡವನ್ನು ಸರ್ಕಾರದ ಎಲ್ಲಾ ಹಂತಗಳಲ್ಲೂ ಆಡಳಿತ ಭಾಷೆಯಾಗಿ ಜಾರಿ ತರುವ ರಾಜ್ಯ ಸರ್ಕಾರದ ನೀತಿಯ ಅನುಸಾರ ಕೇಂದ್ರ ಮತ್ತು ರಾಜ್ಯ ಅಧಿನಿಯಮಗಳನ್ನು ಮತ್ತು ನಿಯಮಗಳನ್ನು ಭಾಷಾಂತರ ಮಾಡುವ ಕೆಲಸ ಮಾತ್ರವಲ್ಲದೆ, ಅಮೂರ್ತ ಸ್ವರೂಪದ ಭಾಷೆಯಲ್ಲಿ ವ್ಯಕ್ತಪಡಿಸಲಾದ, ಸೂಕ್ಷ್ಮಾತಿ ಸೂಕ್ಷ್ಮವಾಗಿ ಹೆಣೆದುಕೊಂಡ, ಗಹನ ವಿಚಾರದಧಾರೆಗಳ  ಕಾನೂನು ಮತ್ತು ಆಡಳಿತ ಚಿಂತನವನ್ನು ಸೂಕ್ತವಾಗಿ ಅಭಿವ್ಯಕ್ತಿಸಬಲ್ಲ ಸಾಮರ್ಥ್ಯ ಪಡೆಯುವಂತೆ ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸುವ ಮಹತ್ವಪೂರ್ಣ  ಕಾರ್ಯದಲ್ಲಿ ಆಯೋಗವು ನಿರತವಾಗಿರುತ್ತದೆ.  ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಮತ್ತು ಸರ್ಕಾರವು ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ನೇಮಿಸಿದ ಸದಸ್ಯರುಗಳಿರುತ್ತಾರೆ.ಸರ್ಕಾರವು ರಾಜಭಾಷಾ(ವಿಧಾಯೀ) ಆಯೋಗದ ಕಾಲಾವಧಿಯನ್ನು ಆಗಿಂದಾಗ್ಗೆ ವಿಸ್ತರಿಸಿರುತ್ತದೆ. 

ಸರ್ಕಾರದ ಆದೇಶ ಸಂಖ್ಯೆ: ಸಂವ್ಯಶಾಇ 77 ಭಾನಿವಿ 2017 ದಿನಾಂಕ 06-06-2017 ರಲ್ಲಿ ರಾಜಭಾಷಾ (ವಿಧಾಯೀ) ಆಯೋಗದ ಅವಧಿಯನ್ನು ದಿನಾಂಕ 23-06-2017 ರಿಂದ 23-06-2020ರ ವರೆಗೆ ಮೂರು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಿಸ್ತರಿಸಿತ್ತು.   ಸದರಿ ಅಯೋಗದ ಕಾರ್ಯಾವಧಿಯು ದಿನಾಂಕ 17-03-2020ರಂದು ಮುಕ್ತಾಯಗೊಂಡಿದ್ದು, ಸರ್ಕಾರದ ಆದೇಶ ಸಂಖ್ಯೆ; ಸಂವ್ಯಶಾಇ 35 ಭಾನಿವಿ 2020 ದಿನಾಂಕ 17-07-2020 ರಲ್ಲಿ  ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳವರೆಗೆ   ಪುನರ್‍ರಚಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ  ಸಂವ್ಯಶಾಇ 55 ಭಾನಿವಿ 2021 ದಿನಾಂಕ 08-11-02021ರ ಆದೇಶದ ಮೇರೆಗೆ ಕರ್ನಾಟಕ ರಾಜಭಾಷಾ (ವಿಧಾಯೀ)) ಆಯೋಗದಲ್ಲಿ ಖಾಲಿಯಿರುವ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ 08-10-2021 ರಿಂದ ಜಾರಿಗೆ ಬರುವಂತೆ    ಶ್ರೀ ಜಿ. ಶ್ರೀಧರ್, ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ವವಹಾರಗಳು ,ಮತ್ತು ಶಾಸನ ರಚನಾ ಇಲಾಖೆ ಇವರನ್ನು ತಾತ್ಕಾಲಿಕವಾಗಿ ನೇಮಿಸಿ ಆದೇಶಿಸಿದೆ.  

 

ಪ್ರಸ್ತುತ, ಸದರಿ ಆಯೋಗದಲ್ಲಿ  ಈ ಕೆಳಕಂಡ  ಅಧ್ಯಕ್ಷರು ಹಾಗೂ ಸದಸ್ಯರುಗಳಿರುತ್ತಾರೆ.

ಕ್ರಮ

ಸಂಖ್ಯೆ

ಶ್ರೀಯುತರಾದ

ರಾಜಭಾಷಾ (ವಿಧಾಯೀ) ಆಯೋಗದ ಆಧ್ಯಕ್ಷರು/ಸದಸ್ಯರು

ಮೊಬೈಲ್ ಸಂ

1.

ಜಿ. ಶ್ರೀಧರ್

ಸರ್ಕಾರದ ಕಾರ್ಯದರ್ಶಿಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ವಿಧಾನಸೌಧ, ಬೆಂಗಳೂರು

ಅಧ್ಯಕ್ಷರು

8310489636

2

ದಾಮೋದರ್‍ ಹೆಚ್‍.ಪಿ.

 ನಿವೃತ್ತ ಉಪ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ, ಬೆಂಗಳೂರು

ಸದಸ್ಯರು

9902582012


3.

ಡಾ.ಟಿ.ಜಿ. ಪ್ರಭಾಶಂಕರ ಪ್ರೇಮಿ

ನಿವೃತ್ತ ಪ್ರಾಧ್ಯಾಪಕರು

ಪ್ರಭುಪ್ರಿಯ” #391, 6ನೇ ಮುಖ್ಯರಸ್ತೆ, 3ನೇ ಬ್ಲಾಕ್‍, 3ನೇ ಹಂತ, ಬಸವೇಶ್ವರನಗರ, ಬೆಂಗಳೂರು 560079

 

 

 ಸದಸ್ಯರು

9880781278

4.

 ಸಿ.ಎಂ. ಪ್ರಭುದೇವ

ನಿವೃತ್ತ ಸಹಾಯಕ ನಿರ್ದೇಶಕರು

ಭಾಷಾಂತರ ನಿರ್ದೇಶನಾಲಯ, ಬೆಂಗಳೂರು

 

ಸದಸ್ಯರು

9986586768

 

ರಾಜಭಾಷಾ (ವಿಧಾಯೀ) ಆಯೋಗದ ವಿಳಾಸ ಮತ್ತು ದೂರವಾಣಿ ಸಂಖ್ಯೆ:

 1.

 

ರಾಜಭಾಷಾ(ವಿಧಾಯೀ) ಆಯೋಗ

20ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ,

ಡಾ|| ಬಿ. ಆರ್. ಅಂಬೇಡ್ಕರ್‍ ವೀಧಿ

ಬೆಂಗಳೂರು-560 001

 

080-22864379

2.

ಸಭಾಂಗಣ

ರಾಜಭಾ(ವಿಧಾಯೀ) ಆಯೋಗ

12ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ,

ಡಾ|| ಬಿ. ಆರ್. ಅಂಬೇಡ್ಕರ್‍ ವೀಧಿ

ಬೆಂಗಳೂರು-560 001

 

080-22864778

 

 

 

ಇತ್ತೀಚಿನ ನವೀಕರಣ​ : 25-11-2021 03:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಭಾಷಾಂತರ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080