ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

           1956ರ ನವೆಂಬರ್‍ 1 ರಂದು ಕರ್ನಾಟಕ ರಾಜ್ಯ ರಚನೆಯಾಯಿತು. ರಾಜ್ಯಗಳ ಪುನರ್ವಿಂಗಡಣೆಯೊಂದಿಗೆ ಹಿಂದಿನ ಮುಂಬಯಿ, ಮದರಾಸು ಮತ್ತು ಹೈದರಾಬಾದ್‍ ಸಂಸ್ಥಾನಗಳಲ್ಲಿನ ಎಲ್ಲ ಭಾಷಾಂತರ ಕಚೇರಿಗಳ ಕನ್ನಡ ವಿಭಾಗಗಳನ್ನು ನಮ್ಮ ರಾಜ್ಯ ಸರ್ಕಾರದ ಅಂದಿನ ಮುಖ್ಯ ಭಾಷಾಂತರಕಾರರ ಕಚೇರಿಯೊಂದಿಗೆ ಸೇರಿಸಲಾಯಿತು.

 

ಸರ್ಕಾರದ ಆಡಳಿತ ಭಾಷಾ ನೀತಿಗನುಗುಣವಾಗಿ, ಸರ್ಕಾರವು 1973ರಲ್ಲಿ ಮುಖ್ಯ ಭಾಷಾಂತರಕಾರರ ಕಚೇರಿಯನ್ನು ಪುನರ್‍ ರಚಿಸಿ  ಭಾಷಾ ನಿರ್ದೇಶನಾಲಯ”  ವನ್ನಾಗಿ ರೂಪಿಸಿತು.  1977ರಲ್ಲಿ ಕರ್ನಾಟಕ ಸರ್ಕಾರವು ಭಾಷಾನಿರ್ದೇಶನಾಲಯವನ್ನು ಪುನ: ಸಂಘಟಿಸಿ  ‘’ಭಾಷಾಂತರ ನಿರ್ದೇಶನಾಲಯ’’  ಎಂದು ರಚಿಸಿ ಅದಕ್ಕೆ ಒಂದು ಇಲಾಖೆಯ ಸ್ಥಾನಮಾನವನ್ನುನೀಡಿರುತ್ತದೆ.

 

ಕನ್ನಡವನ್ನು ಸರ್ಕಾರದ ಎಲ್ಲಾ ಹಂತಗಳಲ್ಲೂ ಆಡಳಿತ ಭಾಷೆಯಾಗಿ ಜಾರಿಗೆ ತರುವ ರಾಜ್ಯಸರ್ಕಾರದ ನೀತಿಯ ಅನ್ವಯ ಈ ಇಲಾಖೆಯು ಕೇಂದ್ರಅಧಿನಿಯಮಗಳು ಮತ್ತು ರಾಜ್ಯಅಧಿನಿಯಮಗಳು ಮತ್ತು ನಿಯಮಗಳನ್ನು ಕನ್ನಡಕ್ಕೆ ಭಾಷಾಂತರಿಸುವುದು ಹಾಗೂ ಅವುಗಳನ್ನು ಪುಸ್ತಕ ರೂಪದಲ್ಲಿ ಅಧಿಕೃತ ಕನ್ನಡ ಪಾಠವನ್ನು ಪ್ರಕಟಿಸುವ ಕೆಲಸವನ್ನು ನಿರ್ವಹಿಸುತ್ತಾ ಬಂದಿದೆ. ಇಷ್ಟೇ ಅಲ್ಲದೆ, ಅಮೂರ್ತ ಸ್ವರೂಪದ ಭಾಷೆಯಲ್ಲಿ ವ್ಯಕ್ತಪಡಿಸಲಾದ, ಸೂಕ್ಷ್ಮಾತಿಸೂಕ್ಷ್ಮವಾಗಿ ಹೆಣೆದುಕೊಂಡ, ಗಹನ ವಿಚಾರಧಾರೆಗಳ ಕಾನೂನು ಮತ್ತು ಆಡಳಿತ ಚಿಂತನವನ್ನು ಸೂಕ್ತವಾಗಿ ಅಭಿವ್ಯಕ್ತಿಸಬಲ್ಲ ಸಾಮರ್ಥ್ಯ ಪಡೆಯುವಂತೆ ಕನ್ನಡಭಾಷೆಯನ್ನು ಅಭಿವೃದ್ಧಿಗೊಳಿಸುವ ಮಹತ್ವಪೂರ್ಣ ಕಾರ್ಯದಲ್ಲಿ  ಭಾಷಾಂತರ ನಿರ್ದೇಶನಾಲಯವು ನಿರತವಾಗಿದೆ.

 

ಇಂಗ್ಲೀಷಿನ ಬದಲು ಕನ್ನಡವನ್ನು ಸುಲಭವಾಗಿ ಆಡಳಿತ ಭಾಷೆಯಾಗಿ  ಜಾರಿಗೆ ತರುವ ಬಗ್ಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಭಾಷಾಂತರ ನಿರ್ದೇಶನಾಲಯವು, ಸರ್ಕಾರದ ಅಧಿಸೂಚನೆಗಳು, ಅಧಿಕೃತ ಜ್ಞಾಪನಗಳು, ಸುತ್ತೋಲೆಗಳು ಕರಡು ಸಚಿವ ಸಂಪುಟ ಟಿಪ್ಪಣಿಗಳು ಇತ್ಯಾದಿಯ ಇಂಗ್ಲಿಷ್-ಕನ್ನಡ ಹಾಗೂ ಕನ್ನಡ- ಇಂಗ್ಲೀಷ್ ಭಾಷಾಂತರ ಕಾರ್ಯವನ್ನು  ನಿರ್ವಹಿಸುತ್ತಿದೆ.

     

 

ಇತ್ತೀಚಿನ ನವೀಕರಣ​ : 03-09-2021 03:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಭಾಷಾಂತರ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080